No menu items!
Tuesday, December 3, 2024

“ಆಪ್” ಮೊದಲ ನಿರ್ಧಾರ : ಮಾಜಿ ರಾಜಕಾರಣಿಗಳ ಪೊಲೀಸ್ ಭದ್ರತೆ ಹಿಂದಕ್ಕೆ

Must read

ಚಂಡೀಗಡ: ಇದು ದೇಶದ ನಾಗರಿಕರಲ್ಲಿ ಉತ್ತೇಜನ ನೀಡುವ, “ನಮ್ಮಲಿಯೂ ಹೀಗಾಗಬಾರದೆ” ಎಂಬ ಸ್ವಗತದೊಂದಿಗೆ ಆರಂಭವಾಗುವ ವರದಿ ಇದು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಲ್ ನೇತೃತ್ವದ “ಆಮ್ ಆದ್ಮಿ ಪಾರ್ಟಿ” ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗಳನ್ನು ಇನ್ನಿಲ್ಲದಂತೆ ಸೋಲಿಸಿ ಗದ್ದುಗೆ ಏರಲಿದೆ. ಇನ್ನೂ ಸರಕಾರ ರಚಿಸದ “ಆಪ್” ನಿವೃತ್ತ ರಾಜಕಾರಣಿಗಳಿಗೆ ಕೊಟ್ಟಿರುವ ಪೊಲೀಸ್ ಭದ್ರತೆಯನ್ನು ಹಿಂದಕ್ಕೆ ಪಡೆಯುವದಾಗಿ ಹೇಳಿದೆ.

ಮಾರ್ಚ್ 16 ರಂದು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಭಗವಂತ್ ಮಾನ್, ರಾಜ್ಯದಲ್ಲಿ ಅನೇಕ ವಿವಿಐಪಿಗಳು ಸೇರಿದಂತೆ 122 ಮಾಜಿ ಸಂಸದರು ಮತ್ತು ಶಾಸಕರ ಭದ್ರತೆಯನ್ನು ಹಿಂಪಡೆಯಲು ಆದೇಶ ಹೊರಡಿಸಿದ್ದಾರೆ.

ಮಾನ್ ಶನಿವಾರ ಹೊರಡಿಸಿರುವ ಆದೇಶದ ಪ್ರಕಾರ, ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಬಾದಲ್ ಕುಟುಂಬಕ್ಕೆ ಭದ್ರತೆ ನೀಡಲಾಗಿದ್ದು, ಮಾಜಿ ಮುಖ್ಯಮಂತ್ರಿಗಳಾದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಚರಣ್‌ಜಿತ್ ಸಿಂಗ್ ಚನ್ನಿ, ಉಳಿದೆಲ್ಲ ಕಾಂಗ್ರೆಸ್ ಮತ್ತು ಅಕಾಲಿದಳದ ನಾಯಕರಿಗೆ ನಾಯಕರಿಗೆ ಭದ್ರೆ ತೆಗೆಯಲು ಸೂಚನೆ ನೀಡಲಾಗಿದೆ.

ಒಂದೆಡೆ ಪೊಲೀಸ್ ಠಾಣೆಗಳು ಖಾಲಿ ಬಿದ್ದಿದ್ದರೆ, ಮತ್ತೊಂದೆಡೆ ನಾಯಕರ ಮನೆ ಮುಂದೆ ಟೆಂಟ್ ಹಾಕಿ ಭದ್ರತೆ ಕಲ್ಪಿಸಲಾಗಿದೆ ಎಂದು ಭಗವಂತ್ ಮಾನ್ ಹೇಳಿದರು.
ಏತನ್ಮಧ್ಯೆ, ನಿಯೋಜಿತ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶನಿವಾರ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ಭೇಟಿಯಾದ ನಂತರ ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.
ನಾನು ರಾಜ್ಯಪಾಲರನ್ನು ಭೇಟಿ ಮಾಡಿ, ನಮ್ಮ ಶಾಸಕರ ಬೆಂಬಲದ ಪತ್ರವನ್ನು ಹಸ್ತಾಂತರಿಸಿದ್ದೇನೆ ಮತ್ತು ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ನಾವು ಎಲ್ಲಿ ಪ್ರಮಾಣ ವಚನ ಸಮಾರಂಭವನ್ನು ನಡೆಸಬೇಕೆಂದು ಬಯಸುತ್ತೇವೆಯೋ ಎಂಬುದನ್ನು ಅವರಿಗೆ ಹೇಳಲು ಅವರು ನನಗೆ ಸೂಚಿಸಿದ್ದಾರೆ. ಇದು ನಡೆಯಲಿದೆ. ಮಾರ್ಚ್ 16ರಂದು ಮಧ್ಯಾಹ್ನ 12.30ಕ್ಕೆ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್ನಲ್ಲಿ ನಡೆಯಲಿದೆ ಎಂದು ಹೇಳಿದರು.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಎಎಪಿ 92 ಸ್ಥಾನಗಳನ್ನು ಗೆದ್ದಿದೆ. ನಿರ್ಗಮಿತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಎಸ್‌ಎಡಿ ಪಿತಾಮಹ ಪ್ರಕಾಶ್ ಸಿಂಗ್ ಬಾದಲ್ ಮತ್ತು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೇರಿದಂತೆ ಹಲವಾರು ದಿಗ್ಗಜರು ಸೋತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!