No menu items!
Friday, December 6, 2024

ಮಳೆಯಿಂದ ಬಿದ್ದ ಮನೆ ನೂತನವಾಗಿ ನಿರ್ಮಿಸುತ್ತಿರುವ ಜೀವನ್ ಸಂಘರ್ಷ ಫೌಂಡೇಶನ್

Must read

ಬೆಳಗಾವಿ : ಮಳೆಯಿಂದ ನೆನೆದು ಕುಸಿಯುವ ಹಂತದಲ್ಲಿದ್ದ ಮನೆಯನ್ನು ಬೀಳಿಸಿ ಅದೇ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಿಸುವ ಕಾಮಗಾರಿಗೆ ಬೆಳಗಾವಿಯ ಜೀವನ್ ಸಂಘರ್ಷ ಫೌಂಡೇಶನ್ ಪ್ರಾರಂಭಿಸಿದೆ.

ಸಿಧಾರ್ಥ್ ಬೋರ್ಡಿಂಗ್ ಆವರಣದ ಅನೇಕ ಮನೆಗಳು ಮಳೆಯ ದೆಸೆಯಿಂದ ದುಸ್ಥಿತಿಯಲ್ಲಿದ್ದು, ಅವುಗಳಲ್ಲಿ ಚಂದ್ರಕಾಂತ್ ಹಿರೇಮಠ್ ಎಂಬವರ ಮನೆ ಕುಸಿದು ಅವರು ನಿರ್ಗತಿಕರಾಗಿದ್ದಾರೆ. ಅವರಿಗೆ ನಿರೀಕ್ಷೆಯಾಗಿ ಬಂದಿರುವ “ಜೀವನ್ ಸಂಘರ್ಷ ಫೌಂಡೇಶನ್” ನ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಡಾ. ಗಣಪತ್ ಪಾಟೀಲ್ ಗುಧಲಿ ಪೂಜೆ ಮಾಡಿ, ಸಿಮೆಂಟ್ ಕಾಂಕ್ರೀಟ್ ಕ್ವಾಲಂ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಡಾ. ಪಾಟೀಲ್ ಸಿಧಾರ್ಥ್ ಬೋರ್ಡಿಂಗ್ ನಲ್ಲಿ ವಿದ್ಯಾರ್ಜನೆಗಾಗಿ ವಾಸ್ತವ್ಯ ಪಡೆದಿರುವ ವಿದ್ಯಾರ್ಥಿಗಳಿಗೆ ಊಟದ ಮೆಸ್ಸ್ ವ್ಯವಸ್ಥೆ ಕೂಡ ಮಾಡಿಕೊಡಲಾಗುವದೆಂದು ತಿಳಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!