No menu items!
Tuesday, December 3, 2024

ಮುರಗೋಡ್ ಬಿಡಿಸಿಸಿ ಬ್ಯಾಂಕ್ ಕಳ್ಳತನ ಪ್ರಕರಣ, ಗುಮಸ್ತ ಅರೆಸ್ಟ್

Must read

ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲೇ ದೊಡ್ಡದೆನ್ನಲಾದ ಸವದತ್ತಿ ತಾಲೂಕಿನ ಮುರಗೋಡ್ ಗ್ರಾಮದ ಡಿಸಿಸಿ ಬ್ಯಾಂಕ್ ಕಳ್ಳತನದ ಶೋಧನೆಯನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು ಬ್ಯಾಂಕ್ ನ ಸಿಬ್ಬಂದಿಯೊಬ್ಬರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಕಳೆದ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆಯವರೆಗೆ ಬ್ಯಾಂಕ್ ಕಳ್ಳತನ ಸಂಭವಿಸಿತ್ತು. ಬ್ಯಾಂಕ್ ನ ಕ್ಲರ್ಕ್ ಒಬ್ಬರು ತಮ್ಮ ಸ್ನೇಹಿತರಲ್ಲೊಬ್ಬರಿಗೆ ಬ್ಯಾಂಕ್ ನ ಡೂಪ್ಲಿಕೇಟ್ ಬೀಗದ ಕೈಗಳನ್ನು ನೀಡಿದ್ದರು.

ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ನ ಮುರಗೋಡ್ ಶಾಖೆಯ ಬಾಗಿಲು ಮುರಿದು ಒಳಗೆ ತೆರಳಿದ ಕಳ್ಳರು, ಡೂಪ್ಲಿಕೇಟ್ ಕೀ ಗಳನ್ನು ಬಳಸಿ ತಿಜೋರಿ ಹಾಗು ಲಾಕರಗಳನ್ನು ತೆರೆದು 4 ಕೋಟಿ ನಗದು ಹಾಗು 1.5 ಕೋಟಿ ಮೌಲ್ಯದ ಚಿನ್ನಭರಣ ತೆಗೆದುಕೊಂಡು ಪರಾರಿಯಾಗಿದ್ದಾರೆ.

ಬ್ಯಾಂಕ್ ನ ಬಾಗಿಲು ತೆರೆದಿರುವದನ್ನು ಕಂಡ ಜನ ಪೊಲೀಸರಿಗೆ ತಿಳಿಸಿದಾಗ ಕಳ್ಳತನದ ಕುರಿತು ಗೊತ್ತಾಗಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!