No menu items!
Thursday, November 21, 2024

ಹಿಜಾಬ್ ತಿರ್ಪಿಗೆ ಅಸಮಾಧಾನ, ಗುರುವಾರ ಕರ್ನಾಟಕ ಬಂದ್

Must read

ಬೆಂಗಳೂರು : ಕರ್ನಾಟಕ ಉಚ್ಚ ನ್ಯಾಯಾಲಯ ಹಿಜಾಬ್ ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪು ತೃಪ್ತಿಕರವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಮುಸ್ಲಿಂ ಸಂಘಟನೆ – ಅಮೀರ್-ಇ-ಶರಿಯತ್ – ನಾಳೆ, ಮಾರ್ಚ್ 17 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ.

ಕೋರ್ಟ್ ತೀರ್ಪು ನಿರಾಶಾದಾಯಕವಾಗಿದ್ದು, ನಾಳೆ ಶಾಂತಿಯುತವಾಗಿ ಬಂದ್ ನಡೆಸಬೇಕು ಎಂದು ಅಮೀರ್-ಇ-ಶರಿಯತ್ ಮುಖಂಡ ಮೌಲಾನಾ ಸಗೀರ್ ಅಹಮದ್ ಕರೆ ನೀಡಿದ್ದಾರೆ.

ಬಲವಂತದ ಬಂದ್ ಆಗಲಿ, ಜಾಥಾ , ಮೆರವಣಿಗೆ ಆಗಲಿ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ”ಹಿಜಾಬ್ ಧರಿಸಿವುದು ಇಸ್ಲಾಂ ನ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ಸಂಹಿತೆ ಕುರಿತಾಗಿ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ, ಇದನ್ನು ಪ್ರಶ್ನಿಸುವಂತಿಲ್ಲ” ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!