ಬೆಳಗಾವಿ : ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಹಾಯ್ದು ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ, ಹಳೇ ಬೆಳಗಾವಿ ನಿವಾಸಿ ಪ್ರತಾಪ್ ಲಕ್ಷ್ಮಣ್ ಸಾಲಗೂಡೆ ಎಂಬವರು ಸ್ಥಳದಲ್ಲೇ ಅಸುನಿಗಿದ ಘಟನೆ ಬಳ್ಳಾರಿ ನಾಲಾ ಸಮೀಪ ಬಿಎಸ್ ಯಡಿಯೂರಪ್ಪ ಮಾರ್ಗದಲ್ಲಿ ಸಂಭವಿಸಿದೆ.
ಅಪಘಾತದ ತೀವ್ರತೆ ಎಷ್ಟಿತೆಂದರೆ ಪ್ರತಾಪ್ ಅವರಿಗೆ ಹಾಯ್ದ ಟ್ರಕ್ ರಸ್ತೆಬದಿಯ ಮರವೊಂದಕ್ಕೂ ಡಿಕ್ಕಿ ಹೊಡೆದಿದ್ದು ಅದು ಬಿದಿದ್ದೆ.
ಪ್ರತಾಪ್ ಅವರು ಪ್ರತಿದಿನ ಮುಂಜಾನೆ ತಮ್ಮ ಮನೆಯಿದ್ದ ಹಳೇ ಬೆಳಗಾವಿಯಿಂದ ಅಲಾರವಾಡ ಕ್ರಾಸ್ ವರೆಗೂ ವಾಯುವಿಹಾರಕ್ಕೆ ಹೋಗುವ ಅಭ್ಯಾಸ ಹೊಂದಿದ್ದರು.
ಅಪಘಾತದ ಕುರಿತು ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.