ಬೆಳಗಾವಿ : ಬೆಳಗಾವಿಯ ಬಿಲ್ಡರ್ ರಾಜು ದೊಡ್ಡಬೊಮ್ಮನವರ ಹತ್ಯೆಗೆ ಸಂಬಂಧಿಸಿದಂತೆ ಸಂಜಯ್ ರಜಪೂತ ಹಾಗು ವಿಜಯ್ ಜಾಗೃತ ಎಂಬ ಇಬ್ಬರು ಬಾಡಿಗೆ ಹಂತಕರನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಪ್ರಕರಣದಲ್ಲಿ ವಶಕ್ಕೆ ಪಡೆದಿರುವವರ ಸಂಖ್ಯೆ ಐದಕ್ಕೇರಿದೆ.
ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ರಾಜು ಅವರಿಂದ ವಂಚನೆಗೋಳಗಾದ ಅವರ ಕಿರಣ್ ಎಂಬ ಅವರ ಎರಡನೇ ಪತ್ನಿ, ಪತಿಯ ವ್ಯವಹಾರ ಪಾಲುದಾರರದ ಶಶಿಕಾಂತ್ ಶಂಕರಗೌಡ ಹಾಗು ಧರನೇಂದ್ರ ಘಂಟಿ ಎಂಬವರನ್ನು ಪೊಲೀಸರು ಕಳೆದವಾರವೇ ವಶಕ್ಕೆ ಪಡೆದು ಬಂಧಿಸಿದ್ದಾರೆ. ಅವರು ನೀಡಿರುವ ಮಾಹಿತಿಯಂತೆ ಈ ಇಬ್ಬರು ಬಾಡಿಗೆ ಹಂತಕರನ್ನು ಬಂಧಿಸಿದ್ದು ಅವರ ತಂಡದ ಊಳಿದ ಸದಸ್ಯರ ಬಂಧನ ಕಾರ್ಯಾಚರಣೆ ಮುಂದುವರೆದಿದೆ.
40 ವರುಷದ ಬಿಲ್ಡರ್ ರಾಜು ತಮ್ಮ ಮೊದಲನೇ ವಿವಾಹದ ವಿಷಯ ಬಚ್ಚಿಟ್ಟು 26 ವರುಷದ ಕಿರಣ್ ಅವರನ್ನು ಮದುವೆ ಮಾಡಿಕೊಂಡಿದ್ದರು. ಅವರ ಇಬ್ಬರು ಪತ್ನಿಯರಿಗೂ ಎರಡೆರಡು ಮಕ್ಕಳಿವೆ. ಈ ಇಬ್ಬರೂ ಪತ್ನಿಯರಲದೇ ಅವರು ಮತ್ತೊಂದು ‘ಮದುವೆ ‘ ಮಾಡಿಕೊಂಡಿದ್ದರು, ಆ ಮಹಿಳೆಯೂ ಈಗ ಗರ್ಭಿಣಿಯಾಗಿದ್ದಾರೆ. ರಾಜು ತಮ್ಮ ಮೂರೂ ಪತ್ನಿಯರಿಗೆ ತಮ್ಮ ಈ ಅಕ್ರಮ ವಿವಾಹಗಳ ಕುರಿತು ತಿಳಿಯದಂತೆ ನೋಡಿಕೊಂಡಿದ್ದರು.
ಪತಿ ರಾಜು ನಡವಳಿಕೆ ಕುರಿತು ಸಂಶಯಗೊಂಡ ಎರಡನೇ ಪತ್ನಿ ಕಿರಣ್, ಖಾಸಗಿ ಡಿಟೇಕ್ಟಿವ್ ಏಜನ್ಸಿ ಗಳ ಮೂಲಕ ಅವರ ಚಲನವಲನ ತಿಳಿದುಕೊಂಡು ಸಂಗ್ರಹಿಸಿದ ವಿಷಯಗಳ ಕುರಿತು ಅಘಾತಕೋಳಗಾಗಿದ್ದಾರೆ. ಇನ್ನಷ್ಟು ದೀರ್ಘ ತನಿಖೆ ನಡೆಸಿದಾಗ ಅವರು ತಮ್ಮ ವ್ಯವಹಾರ ಪಾಲುಧಾರರೊಂದಿಗೂ ವ್ಯವಹಾರ ಸಂಬಂಧ ಕೆಡಿಸಿಕೊಂಡಿದ್ದನ್ನು ಅರಿತು ಅವರನ್ನು ಸಂಪರ್ಕಿಸಿ, ಅವರ ಒಪ್ಪಿಗೆಯಿಂದ ಪತಿಯ ಹತ್ಯೆಗೆ ಸಂಚು ರೂಪಿಸಿದ್ದಾರೆ.
ನಂತರ ಕಿರಣ್, ಪತಿ ರಾಜು ವ್ಯವಹಾರ ಪಾರ್ಟ್ನರ್ ಗಳಾದ ಬೆಳಗಾವಿ ಹಿಂದವಾಡಿಯ ಶಶಿಕಾಂತ ಶಂಕರಗೌಡ ಹಾಗು ಓಂ ನಗರ ಖಾಸಭಾಗ್ ನ ಧರನೇಂದ್ರ ಘಂಟಿ ಅವರೊಂದಿಗೆ ಸೇರಿ ‘ಸುಪಾರಿ ಕಿಲ್ಲರ್’ ಗಳನ್ನು ಸಂಪರ್ಕಿಸಿ ಅವರ ಹತ್ಯೆ ಮಾಡಲು 10 ಲಕ್ಷ ರೂಪಾಯಿ ಮುಂಗಡವಾಗಿ ನೀಡಿದ್ದರು. ಕೊಲೆಮಾಡುವದಕ್ಕೆ ಹಣ ಪಡೆದ ಹಂತಕರು, ಮೊದಲನೇ ಯತ್ನದಲ್ಲಿ ವಿಫಲರಾಗುತ್ತಾರೆ. ತಮ್ಮ ಹಲ್ಲೆಗೆ ಯತ್ನಿಸುಲಾಗುತ್ತಿದೆ ಎಂಬುವದು ರಾಜೂವಿಗೆ ಗೊತ್ತೇ ಆಗುವದೇ ಇಲ್ಲ.
ಆದರೆ ಬಾಡಿಗೆ ಹಂತಕರ ಎರಡನೇ ಯತ್ನ ಫೇಲ್ ಆಗುವದಿಲ್ಲ. ಅವರ ಚಲನವಲನದ ಮೇಲೆ ಗಮನವಿಟಿದ್ದ ಹಂತಕರು ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ತಮ್ಮ ಪತ್ನಿಯನ್ನು ನೋಡಲು ಹೋಗುವದನ್ನು ಅರಿತು ಅವರಿಗಾಗಿ ಅವರ ಭವಾನಿ ನಗರದ ಮನೆಯ ಬಳಿ ಅಡಗಿ ಕಾಯುತ್ತಿದ್ದರು. ಮುಂಜಾನೆ ಸುಮಾರು ಆರು ಗಂಟೆಗೆ ಅವರು ಮನೆಯಿಂದ ಹೊರಗೆ ಬಂದು ತಮ್ಮ ಕಾರಿನ ಬಾಗಿಲು ತೆರೆಯುವಾಗ ಅವರ ಮುಖದ ಮೇಲೆ ಮೆಣಸಿನಪುಡಿ ಎರಚಿ ಕಬ್ಬಿನದ ಆಯುಧಗಳಿಂದ ಹೊಡೆದು, ಅವರು ಸತ್ತದನ್ನು ತಿಳಿದುಕೊಂಡೇ ಅಲ್ಲಿಂದ ಪಲಾಯನ ಮಾಡಿದ್ದಾರೆ. ಇವರ ಬಂಧನಕ್ಕೆ ಪೊಲೀಸರು ‘ಬಲೆ ಬಿಸಿದ್ದಾರೆ.’.