No menu items!
Tuesday, October 22, 2024

ಮುಸ್ಲಿಂರ ಮನಸ್ಥಿತಿ ಬದಲಾಗುವವರೆಗೂ ಅವರಿಗೆ ಆರ್ಥಿಕ ಬಹಿಷ್ಕಾರ : ಶ್ರೀರಾಮ ಸೇನೆ

Must read

ಬೆಳಗಾವಿ : ಮುಸ್ಲಿಂ ಸಮುದಾಯದ ಮನಸ್ಥಿತಿ ಬದಲಾಗುವವರೆಗೂ ಅವರೊಂದಿಗೆ ವ್ಯಾಪಾರ ವ್ಯವಹಾರ ನಡೆಸದಿರುವ ಹಿಂದು ಸಂಘಟನೆಗಳ ನಿರ್ಧಾರಕ್ಕೆ ಶ್ರೀರಾಮ ಸೇನೆ ಬೆಂಬಲಿಸಲಿದೆ ಎಂದು, ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಬೆಳಗಾವಿಯಲ್ಲಿ ಗುರುವಾರ ಆಯೋಜಿಸಿದ್ದ ಸುಧೀಗೊಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಕಾಪು ಜಾತ್ರೆಯಲ್ಲಿ “ಮುಸ್ಲಿಂ ವ್ಯಾಪಾರಿಗಳಿಗೆ ಅನುಮತಿಯಿಲ್ಲ” ವೆಂಬ ನಿರ್ಧಾರ ಇಡೀ ರಾಜ್ಯಕ್ಕೆ ಹಬ್ಬುತ್ತಿದೆ. ಇನ್ನು ಮುಂದೆ ಮುಸ್ಲಿಂ ವ್ಯಾಪಾರಿಗಳಿಗೆ ರಾಜ್ಯದ ಯಾವುದೇ ಹಿಂದು ಜಾತ್ರೆ, ದೇವಸ್ಥಾನಗಳ ಆವರಣದಲ್ಲಿ ವ್ಯಾಪಾರಕ್ಕೆ ಸೇನೆ ಅನುಮತಿಸುವದಿಲ್ಲ. ಸವದತ್ತಿಯ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿರುವ ಮುಸ್ಲಿಂ ರ ಎಲ್ಲ ವ್ಯಾಪಾರ ವ್ಯವಹಾರಗಳನ್ನು ಶ್ರೀರಾಮ ಸೇನೆ ತಡೆಯಲಿದೆ, ಇಲ್ಲದಿದ್ದರೆ ಬಲಪ್ರಯೋಗ ಮಾಡಲೂ ಸಿದ್ದವಿದೆ.

ಎರಡು ದಿನದಿಂದ ಜಾತ್ರೆ, ದೇವಸ್ಥಾನದ ಆವರಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ವಿರುದ್ಧ “ಆರ್ಥಿಕ ಬಹಿಷ್ಕಾರ” ಪ್ರಾರಂಭವಾಗಿದೆ, ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವದು. “ಎಲ್ಲಿಯವರೆಗೆ ಮುಸ್ಲಿಂರ ಮನಸ್ಥಿತಿ ಬದಲಾಗುವದಿಲ್ಲವೋ ಅಲ್ಲಿಯವರೆಗೆ, ಅವರು ಗೊ ಹತ್ಯೆ, ಗೊ ಮಾಂಸ ತಿನ್ನುವದನ್ನು ಬಿಡುವದಿಲ್ಲವೋ ಅಲ್ಲಿಯವರೆಗೆ ಅವರ ವಿರುದ್ಧ ‘ಆರ್ಥಿಕ ಬಹಿಷ್ಕಾರ’ ಮುಂದುವರೆಯಲಿದೆ, ಅವರ ಸಿದ್ಧಾಂತ ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗಿದೆ,” ಎಂದು ಅವರು ತಿಳಿಸಿದರು.

ಕಾಲೇಜ್ ಗಳ ಹಿಜಾಬ್ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದವರು ಮುಸ್ಲಿಂರೇ, ಆದರೆ ಈಗ ಅದರ ತೀರ್ಪುನ್ನೇ ಒಪ್ಪುತ್ತಿಲ್ಲದಿರುವದು ವಿಪರ್ಯಾಸ ಎಂದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!