No menu items!
Thursday, December 5, 2024

ಜೈಲ್ ಸಿಬ್ಬಂದಿಯಿಂದ ಥಳಿಸಲ್ಪಟ್ಟಿದ್ದ ಖೈದಿ ಸಾವು

Must read

ಬೆಳಗಾವಿ : ಸುಮಾರು ಎರಡು ವಾರಗಳ ಹಿಂದೆ ಹಿಂಡಲಗಾ ಜೈಲಿನ ಸಿಬ್ಬಂದಿಗಳಿಂದ ಥಳಿಸಲ್ಪಟ್ಟಿದರೆನ್ನಲಾದ, ಕೇರಳದ ಕುಖ್ಯಾತ ರೌಡಿ ತಸ್ಲಿಮ್ ಹತ್ಯೆ ಕೇಸ್‍ನ ಆರೋಪಿ, ಗುರುರಾಜ್ ದೊಡ್ಡಮನಿ ಶುಕ್ರವಾರ ರಾತ್ರಿ ಜೈಲಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಅಸುನಿಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿರುವುದಾಗಿ ಸಂಬಂಧಿಗೆ ಹೇಳಿಕೊಂಡಿದ್ದ ಗುರುರಾಜ್, ಜೈಲಿನ ಸಿಬಂದಿಯೊಬ್ಬರಿಗೆ ಐದನೂರು ರೂಪಾಯಿ ಸಾಲ ನೀಡುವಂತೆ ಕೇಳಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಆತ ಮೃತಪಟ್ಟಿದ್ದಾರೆ.

ಅವರ ಸಾವಿನ ಸುದ್ದಿಯನ್ನು ಜೈಲು ಸಿಬ್ಬಂದಿ ಗುರುರಾಜ್ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಯಾವುದೋ ಕಾರಣಕ್ಕೆ ಜೈಲಿನ ಸಿಬಂಧಿ ಗುರುರಾಜ್ ಅವರನ್ನು ಹದಿನೈದು ದಿನಗಳ ಹಿಂದೆ ಥಳಿಸಿದ್ದರು, ಇದಾದ ಬಳಿಕ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ.

ಗುರುರಾಜ್ ಸಾವಿಗೆ ಹಿಂಡಲಗಾ ಜೈಲು ಸಿಬ್ಬಂದಿಯೇ ಕಾರಣ ಎಂದು ಮೃತನ ಸಹೋದರ ಕಿರಣ್ ಆರೋಪಿಸಿದ್ದಾನೆ. ಅಲ್ಲದೇ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಕುಟುಂಬಸ್ಥರು ಮುಂದಾಗಿದ್ದಾರೆ. 2019ರಲ್ಲಿ ಕೊಲೆ ಪ್ರಕರಣದಲ್ಲಿ ಗುರುರಾಜ್ ಹಿಂಡಲಗಾ ಜೈಲು ಸೇರಿದ್ದ. ಒಟ್ಟಿನಲ್ಲಿ ಜೈಲು ಸಿಬ್ಬಂದಿಯ ಹಲ್ಲೆಯಿಂದಲೇ ಆರೋಪಿ ಗುರುರಾಜ್ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!