ಬೆಂಗಳೂರು: ನಗರದ ಲುಂಬಿನಿ ಪಾರ್ಕ್ ನಲ್ಲಿ ಸ್ಥಾಪಿಸಿದ್ದ ವರನಟ ಡಾ.ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿ ಕಳೆದ ಎರಡು ದಿನಗಳಿಂದ ಕಾಣೆಯಾಗಿದೆ.
ಕಂಚಿನ ಪ್ರತಿಮೆಯಾಗಿರುವದರಿಂದ ಮಾರಾಟ ಮಾಡುವ ಉದ್ದೇಶದಿಂದ ಅದನ್ನು ಕಳ್ಳತನ ಮಾಡಿರುವ ಸಾಧ್ಯತೆಯಿದೆ.
ಕಳೆದ ಎರಡು ದಿನಗಳಿಂದ ಪುತ್ಥಳಿ ಕಾಣದಿರುವದರಿಂದ ಅರಣ್ಯ ಇಲಾಖೆಯ ಅಧಿಕಾರಿ ಯೋಗೇಶ್ ಅವರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ, ಅಮೃತ ಹಳ್ಳಿ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿರೋದಾಗಿ ತಿಳಿದು ಬಂದಿದೆ.