No menu items!
Tuesday, December 3, 2024

ಪ್ರೇಮಿಗಾಗಿ ಆತನ ಕುಟುಂಬದ ಐವರನ್ನು ಹತ್ಯೆಗೈದಿದ್ದಳು ಹಂತಕಿ

Must read

ಮಂಡ್ಯ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನ ಬಜಾರ್ ಲೈನ್ ಬಡಾವಣೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆಯನ್ನು ಪೊಲೀಸರು ಎರಡೇ ದಿನದಲ್ಲಿ ಭೇದಿಸಿ ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.

ಮಂಡ್ಯದ ಕೆಆರ್ ಎಸ್‍ನ ಬಜಾರ್ ಲೈನ್ ಬಡಾವಣೆಯಲ್ಲಿ ಗಂಗಾರಾಮ್ ಅವರ ಪತ್ನಿ ಲಕ್ಷ್ಮೀ (32), ಹಾಗೂ ಮಕ್ಕಳಾದ ರಾಜ್ (13), ಕೋಮಲ್ (7), ಕುನಾಲ್ (4), ಗೋವಿಂದ (8) ಅವರನ್ನು ಫೆಬ್ರವರಿ 6ರಂದು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಈ ಮುಗ್ಧ ಜೀವಗಳ ಕೊಲೆಗೆ ಗಂಡ ಗಂಗಾರಾಮನ ಪ್ರೇಮಿಯೇ ಕಾರಣ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಗಂಗಾರಾಮ್ ಸಂಬಂಧಿ ಲಕ್ಷ್ಮೀ (34) ಎಂಬವಳು ಗಂಗಾರಾಮನನ್ನು ಪ್ರೇಮಿಸುತ್ತಿದ್ದಳು ಹಾಗೂ ತನ್ನನ್ನು ಮದುವೆಯಾಗುವಂತೆ ಅವನನ್ನು ಪೀಡಿಸುತ್ತಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಗಂಗಾರಾಮ, ಲಕ್ಷ್ಮೀಯನ್ನು ಮದುವೆಯಾಗಿದ್ದ. ಇದಾದ ಬಳಿಕ ಗಂಗಾರಾಮ್ ಮತ್ತು ಲಕ್ಷ್ಮಿ, ಹೆಂಡತಿ ಮಕ್ಕಳನ್ನು ತೊರೆದು ತನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದಳು. ಗಂಗಾರಾಮನ ಹೆಂಡತಿ, ಮಕ್ಕಳನ್ನು ಕೊಲೆ ಮಾಡಿದರೆ ನನಗೆ ಗಂಗಾರಾಮ ಸುಲಭವಾಗಿ ತನಗೆ ಸಿಗುತ್ತಾನೆ ಎಂದು ಫೆಬ್ರವರಿ 5ರ ರಾತ್ರಿ ಗಂಗಾರಾಮನ ಮನೆಗೆ ಬಂದು ಎಲ್ಲರ ಜೊತೆಯಲ್ಲಿ ಊಟಮಾಡಿ ಅಲ್ಲಿಯೇ ಮಲಗಿದ್ದಾಳೆ. ಎಲ್ಲರೂ ನಿದ್ರೆಗೆ ಜಾರಿದ ಬಳಿಕ ಎಲ್ಲರನ್ನೂ ಹತ್ಯೆ ಮಾಡಿದ್ದಾಳೆ. ಊಟದಲ್ಲಿ ಮತ್ತು ಬೆರೆಸಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗುತ್ತಿದೆ. ತಾನು ತಂದಿದ್ದ ಸುತ್ತಿಗೆಯಿಂದ ಮೊದಲು ಲಕ್ಷ್ಮೀಗೆ ಬಡಿದು ಕೊಲೆ ಮಾಡಿದ್ದಾಳೆ. ನಂತರ ಎಚ್ಚರಗೊಂಡ ಮಕ್ಕಳ ಮೇಲೂ ಸುತ್ತಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾಳೆ ಎಂದು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಬೆಳಗ್ಗಿನ ಜಾವ 4ಗಂಟೆ ಸಮಯದಲ್ಲಿ ಕೆಆರ್‍ಎಸ್‍ನಿಂದ ಬಸ್ ಮೂಲಕ ಮೈಸೂರಿಗೆ ಪ್ರಯಾಣ ಮಾಡಿ, ಬೆಳಿಗ್ಗೆ 10 ಗಂಟೆ ಸುಮಾರಿಗೆ ತನಗೆ ಏನೂ ಗೊತ್ತಿಲ್ಲ ಎಂಬಂತೆ ಕೊಲೆ ಸ್ಥಳಕ್ಕೆ ಮತ್ತೆ ಬಂದಿದ್ದಾಳೆ. ಮೃತರ ಮನೆ ಮುಂದೆ ಕುಳಿತು ಕಣ್ಣೀರು ಹಾಕಿ ನಾಟಕ ಮಾಡಿದ್ದಳು. ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಕ್ಯಾಮೆರಾ ದೂರ ತೆಗೆದುಕೊಂಡು ಹೋಗಿ ಎಂದು ಅವಾಜ್ ಸಹ ಹಾಕಿದ್ದಳು. ಆದರೆ ಪೊಲೀಸರಿಗೆ ಅನುಮಾನಬಂದು ವಿಚಾರಣೆ ನಡೆಸಿದಾಗ ವಿಷಯ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!