ಬೆಂಗಳೂರು : ಜಿಜಾಬ್, ಕೇಸರಿ ಹಾಗೂ ನೀಲಿ ಶಾಲ್ ವಿವಾದ ಶಿಕ್ಷಣ ಸಂಸ್ಥೆಗಳಲ್ಲಿ ದಿನದಿಂದ ದಿನಕ್ಕೆ ತೀವ್ರ ತಿರುವುಗಳನ್ನು ಪಡೆಯುತ್ತಿರುವದರಿಂದ ಸರಕಾರ 9, 10ನೇ ತರಗತಿ ಹಾಗೂ ಪದವಿಪೂರ್ವ ತರಗತಿಗಳಿಗೆ ಇಂದಿನಿಂದ ಶುಕ್ರವಾರದವರೆಗೆ ರಜೆ ಘೋಷಿಸಲಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (ತಲೆ ಸ್ಕ್ಯಾರ್ಫ್ ) ಧರಿಸಿ ತರಗತಿಗೆ ಬರುವದನ್ನು ವಿರೋಧಿಸಿ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲ್ ಧರಿಸಿ ಬರಲು ಪ್ರಾರಂಭಿಸಿ, ಕ್ಯಾಂಪಸ್ ಗಳಲ್ಲಿ ಘೋಷಣೆ ಕೂಗಲು ಪ್ರಾರಂಭಿದರು. ಇದೆ ಸಂಧರ್ಭದಲ್ಲಿ ಇತರ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿಬರುವ ವಿದ್ಯಾರ್ಥಿನಿಗಳನ್ನು ಬೆಂಬಲಿಸಿ ನೀಲಿ ಬಣ್ಣದ ಶಾಲ್ ಧರಿಸಿ ಬರಲು ಆರಂಭಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಅಹಿತಕಾರಿ ಘಟನೆ ತಪ್ಪಿಸಲು ಮತ್ತು ಮೊದಲಿನಂತೆ ಶಿಕ್ಷಣ ಹಾಗೂ ಅಧ್ಯಯನ ಕೇಂದ್ರೀಕೃತ ಮಾಡಲು ಸರಕಾರ ಮೂರು ದಿನ ರಜೆ ಘೋಷಿಸಿದೆ.