ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶನಿವಾರ, ಭಾನುವಾರ ತಮ್ಮ ತವರು ಜಿಲ್ಲೆ ಧಾರವಾಡ, ತಾವು ಪ್ರತಿನಿದಿಸುವ ಹಾವೇರಿ ಜಿಲ್ಲೆಗಳಿಗೆ ಭೆಟ್ಟಿ ನೀಡಲಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಬಾಗವಹಿಸಲಿದ್ದಾರೆ.
ಶನಿವಾರ ಮಧ್ಯಾಹ್ನ ಬೆಂಗಳೂರಿನಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ರಸ್ತೆ ಮೂಲಕ ತಮ್ಮ ವಿಧಾನ ಸಭೆ ಕ್ಷೇತ್ರ ಶಿಗ್ಗಾವಿಗೆ ರಸ್ತೆ ಮೂಲಕ ತೆರಳಿ, ನಂತರ ಹಾವೇರಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ ಹುಬ್ಬಳಿಯ ತಮ್ಮ ನಿವಾಸದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಮರುದಿನ ಧಾರವಾಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಾಯಂಕಾಲ ರಸ್ತೆ ಮೂಲಕ ಬೆಳಗಾವಿ ತಲುಪಿ, ಸಾಂಬ್ರಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.