No menu items!
Thursday, December 5, 2024

ಬೆಳಗಾವಿ -ಕಿತ್ತೂರು-ಧಾರವಾಡ ರೈಲು ಮಾರ್ಗಕ್ಕೆ ₹ 20ಕೋಟಿ ಬಿಡುಗಡೆ

Must read

ಬೆಳಗಾವಿ : ಧಾರವಾಡ–ಕಿತ್ತೂರು – ಬೆಳಗಾವಿ ನೂತನರೈಲ್ವೆ ಮಾರ್ಗದ ಪ್ರಕಲ್ಪಕ್ಕೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ 20 ಕೋಟಿರೂಪಾಯಿ ಬಿಡುಗಡೆ ಮಾಡಿದೆ ಎಂದು ಬೆಳಗಾವಿ ಸಂಸದೆ ಮಂಗಲ ಅಂಗಡಿ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾಹಿತಿ ನೀಡಿದ ಅವರು
ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ 20 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ನಿರ್ಧಾರಿತ ಸಮಯದಲ್ಲಿ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಆರಂಭಗೊಂಡಿದೆ. ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೂಡ ವಿತರಿಸಲಾಗುತ್ತಿದೆ. ಯಾವ ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸಿಲ್ಲವೆಂದರು.

ಸುರೇಶ ಅಂಗಡಿ ರೈಲ್ವೆ ರಾಜ್ಯ ಸಚಿವರಾಗಿದ್ದ ವೇಳೆ ಧಾರವಾಡ ಕಿತ್ತೂರು ಬೆಳಗಾವಿ ನೂತನ ರೈಲ್ವೆಯೋಜನೆಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಿದ್ದರು. ಈ ವರದಿಯನ್ನ ಮತ್ತೇ ಮರು ಪರಿಶೀಲಿಸಿದರೇ, ಮತ್ತೆ 250 ಕೋಟಿbರೂಪಾಯಿbಅತ್ಯವಶ್ಯವಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಮನ್ ಅವರು 2022-2023ನೇ ಸಾಲಿನ ಉತ್ತಮ ಬಜೆಟ್ ಮಂಡಿಸಿದ್ದಾರೆ.ಕೈಗಾರಿಕೆ, ಕೃಷಿ ಉತ್ಪಾದನೆ, ರಸ್ತೆಕುಡಿಯುವ ನೀರು, ಗ್ರಾಮೀಣಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಕರ್ನಾಟಕಕ್ಕೆ 50% ಹೆಚ್ಚು ಅನುದಾನ ದೊರೆತಿದೆ ಎಂದರು.

ಈ ವೇಳೆ ರಾಜ್ಯಸಭಾ ಸದಸ್ಯಈರಣ್ಣಕಡಾಡಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಉಪಸ್ಥಿತರಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!