ಬೆಳಗಾವಿ : ಎಂದಿನಂತೆ ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದ ವಿದ್ಯಾರ್ಥಿನಿಯರು, ತರಗತಿ ಕೊಠಡಿಗೆ ಹಿಜಾಬ್ ತೆರೆದು ಪ್ರವೇಶಿಸಿದರು.
ಶಾಲೆಯ ಶಿಕ್ಷಕಿಯರು ಶಾಲೆಯ ಗೇಟ್ ಬಳಿಯಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ತಡೆದು, ಕೋರ್ಟ್ ಆದೇಶ ತಿಳಿಸಿ, ಮನವರಿಕೆ ಮಾಡಿ ಅವರು ಒಪ್ಪಿ ತೆರೆದ ನಂತರ ಒಳಗೆ ಪ್ರವೇಶ ನೀಡಿದರು.
ಸರಕಾರಿ ಸರದಾರ್ಸ್ ಹೈ ಸ್ಕೂಲ್ ನ ಮೂವರು ವಿದ್ಯಾರ್ಥಿನಿಯರು ಶಿಕ್ಷಕಿಯರ ಆದೇಶ ಪಾಲಿಸಿದರು. ಮೂವರಲ್ಲಿ ಓರ್ವ ವಿದ್ಯಾರ್ಥಿನಿ ಹಿಜಾಬ್ ಜೊತೆಗೆ ಬುರ್ಖಾ ಕೂಡ ಧರಿಸಿ ಬಂದಿದ್ದರು. ಹಿಜಾಬ್ ಗೇಟ್ ಬಳಿ ತೆಗೆದ ಅವರು ಬುರ್ಖಾ ಶಾಲೆಯ ಕ್ಯಾಂಪಸ್ ಒಳಗೆ, ಶಿಕ್ಷಕಿಯರ ಕೊಠಡಿಯಲ್ಲಿ ತೆಗೆದು ತರಗತಿಗೆ ತೆರಳಿದರು.
ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್, ಪೊಲೀಸ್ ಮುಖ್ಯಸ್ಥರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿವಿಧ ಶಾಲೆಗಳಿಗೆ ಭೆಟ್ಟಿ ನೀಡುತ್ತಿದು ಶಾಂತತೆ ಕಾಪಾಡಲು ಮನವಿ ಮಾಡಿಕೊಳ್ಳುತ್ತಿದ್ದಾರೆ.