No menu items!
Friday, December 6, 2024

ಕುತ್ತಿಗೆಗೆ ಚಾಕು ಹಿಡಿದು ಮನೆ ಲೂಟಿ ಮಾಡಿದ ಡಕಾಯಿತರು

Must read

ಬೆಳಗಾವಿ : ಎಂಟರಿಂದ ಹತ್ತು ಜನರಿದ್ದ ಡಕಾಯಿತರ ತಂಡವೊಂದು ಎರಡು ಮನೆಗಳಿಗೆ ನುಗ್ಗಿ 140ಗ್ರಾಂ ಚಿನ್ನಭರಣ ಹಾಗೂ 75,000ರೂಪಾಯಿ ನಗದನ್ನು ದೋಚಿಕೊಂಡು ಹೋದ ಘಟನೆ ಸಂಕೇಶ್ವರ್ ಪಟ್ಟಣದ ಹೊರವಲಯದಲ್ಲಿ ನಿನ್ನೆ ಸೋಮವಾರ ರಾತ್ರಿ 8ಗಂಟೆ ಸುಮಾರಿಗೆ ನಡೆದಿದೆ.

ಮೊದಲು ರಾಮ ಕಿಲ್ಲೆದಾರ ಎಂಬವರ ಮನೆಗೆ ತೆರಳಿದ ತಂಡ, ಮನೆಯ ಬೀಗಮುರಿದು, ಒಳಗೆ ಹೋಗಿ ಬಿರುವಿನಲಿಟ್ಟಿದ್ದ 30ಗ್ರಾಂ ಚಿನ್ನದ ಆಭರಣಗಳನ್ನು ತೆಗೆದುಕೊಂಡಿದೆ. ನಂತರ ಹತ್ತಿರದಲ್ಲಿದ್ದ ರಾಮ ಕಿಲ್ಲೆದಾರ ಅವರ ಸಂಬಂದಿಕರ ಮನೆಗೆ ತೆರಳಿ, ಮನೆಯಲಿದ್ದ ಮೂವರನ್ನು ಹಗ್ಗದಿಂದ ಕಟ್ಟಿ ನಂತರ ಬಿರುವಿನಲ್ಲಿದ್ದ 110ಗ್ರಾಂ ಬಂಗಾರದ ಆಭರಣ ಹಾಗೂ 75,000 ರೂಪಾಯಿ ದೋಚಿಕೊಂಡಿದೆ.

ಕಟ್ಟಿ ಹಾಕಲ್ಪಟವರು ಕೂಗಬಾರದೆಂದು ಡಕಾಯಿತರಲೊಬ್ಬ ಚಾಕುವೊಂದನ್ನು ಅವರಲ್ಲಿ ಒಬ್ಬರ ಕುತ್ತಿಗೆಗೆ ಹಿಡಿದಿದ್ದ. ತಮ್ಮ ಗುರುತು ಸಿಗದಿರಲೆಂದು ಡಕಾಯಿತರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು.

ಘಟನಾ ಸ್ಥಳಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!