ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಹಿಜಾಬ ಧರಿಸಿಯೇ ತರಗತಿ ಪ್ರವೇಶಿಸಿದ್ದ ಸರ್ಕಾರಿ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು, ಹಿಜಾಬ್ ತೆಗೆದು ಬರುವ ಆದೇಶ ಪ್ರತಿಭಟಿಸಿ ತರಗತಿ ಬಹಿಷ್ಕರಿಸಿದರು.
ತಮ್ಮ ಮಕ್ಕಳು ತರಗತಿ ಭಹಿಷ್ಕರಿಸಿದ ವಿಷಯ ತಿಳಿದು ಕಾಲೇಜಿಗೆ ಬಂದ ಪೋಷಕರು ತಾವೂ ಕಾಲೇಜು ಗೇಟ್ ಬಳಿ ಪ್ರತಿಭಟನೆ ನಡಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಹಿಜಾಬ್ ಧರಿಸಿಯೇ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿನಿಯರಿಗೆ ಸರ್ಕಾರದ ವಸ್ತ್ರ ನೀತಿ ಸಂಹಿತೆ ಪಾಲಿಸಬೇಕೆಂದು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮನವಿ ಮಾಡಿದರು. ತರಗತಿಯೊಳಗೆ ಹಿಜಾಬ್ ತೆಗೆದು ಹಾಜರಾಗಬೇಕೆಂದು ಸೂಚನೆ ನೀಡಿದ್ದರು, ಆದರೆ ವಿದ್ಯಾರ್ಥಿನಿಯರು, ಹುಜಾಬ್ ಧರಿಸಿಯೇ ತರಗತಿಗಳಲ್ಲಿ ಕುಳಿತರು. ಅಲ್ಲದೇ ಹಿಜಾಬ್ ತೆಗೆಯಲ್ಲಾ ಎಂದು ಪಟ್ಟು ಹಿಡಿದರು.
ವಿಷಯ ತಿಳಿದ ಡಿಡಿಪಿಯು ಸೇರಿದಂತೆ, ತಹಶಿಲ್ದಾರ ಕಾಲೇಜಿಗೆ ಭೇಟಿ ನೀಡಿದರು. ಹಿಜಾಬ್ ಸಹಿತ ತರಗತಿಗಳಿಗೆ ಬಿಡಬೇಕೆಂದು ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರು ಅವಕಾಶ ನೀಡದ ಕಾರಣ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರು.
ನ್ಯಾಯವಾದಿ ಸಮದ್ ಸುತಾರ್ ಎಂಬ
ವಿದ್ಯಾರ್ಥಿನಿಯರ ಮನವೋಲಿಕೆಗೆ ಯತ್ನ ನಡೆದು ಸರ್ಕಾರದ ನಿಯಮದಂತೆ ತರಗತಿವರೆಗೆ ಮಾತ್ರ ಹಿಜಾಬ್ ಧರಿಸಿ ತರಗತಿ ಗಳಲ್ಲಿ ಹಿಜಾಬ್ ತೆರೆಯಬೇಕೆಂದು ವಿದ್ಯಾರ್ಥಿನಿಯರಿಗೆ ತಿಳವಳಿಕೆ ನೀಡಿದರು.
ಡಿಡಿಪಿಯು ಎನ್ ಕೆ ಬಗಲಿ ಹಾಗೂ ವಿಜಯಪುರ ತಹಶಿಲ್ದಾರ ಸಿದ್ದರಾಯ ಬೋಸಗಿ ಹಾಗೂ ಪೊಲೀಸ್ ಅಧಿಕಾರಿಗಳಿಂದಲೂ ವಿದ್ಯಾರ್ಥಿನಿಯರ ಮನವೋಲಿಕೆಗೆ ಕಸರತ್ತು ನಡೆಯಿತು.
ವಿದ್ಯಾರ್ಥಿನಿಯರ ಪ್ರತಿಭಟನೆ ವಿಷಯ ತಿಳಿದ ಪೋಷಕರು ಕಾಲೇಜಗೆ ಧಾವಿಸಿ “ನಮ್ಮ ಮಕ್ಕಳನ್ನ ಕಾಲೇಜಿನಿಂದ ಹೊರಗೆ ಯಾಕೆ ಹಾಕಿದ್ರಿ,” ಎಂದು ಗಲಾಟೆ ಮಾಡಿದರು.
ಕಾಲೇಜು ಒಳಗೆ ಪೋಷಕರು ಬರದಂತೆ ಪೊಲೀಸರು, ಗೇಟ್ ತಡೆದಾಗ ಅವರೂ ಹೊರಗೆ ಪ್ರತಿಭಟನೆ ನಡೆಸಿದರು. ಆಗ ಜೊತೆಗೂಡಿದ ವಿದ್ಯಾರ್ಥಿನಿಯರು ಕೂಡಾ ಪೋಷಕರ ಜೊತೆಗೂಡಿ “ವಿ ವಾಂಟ್ ಜಸ್ಟೀಸ್, ನಮ್ಗೆ ನ್ಯಾಯ ಬೇಕು,” ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಘೋಷಣೆ ಕೂಗಿದರು.
ಪ್ರತಿಭಟನೆಯ ಬಳಿಕ ವಿದ್ಯಾರ್ಥಿನಿಯರು ಹಾಗೂ ಪೋಷಕರು ವಾಪಸ್ ಮನೆಗೆ ತೆರಳಿದರು. ತರಗತಿಗಳಿಗೆ ಹಾಜರಾಗದ ವಾಪಸ್ ಮನೆಗೆ ತೆರಳಿದ ನೂರಕ್ಕೂ ಅಧಿಕ ವಿದ್ಯಾರ್ಥಿನಿಯರು ವಾಪಸು ತೆರಳಿದರು.
ಸ್ಥಳದಲ್ಲಿಯೇ ಬೀಡುಬಿಟ್ಟ ಪೊಲೀಸರು ಹಾಗೂ ಇತರೆ ಅಧಿಕಾರಿಗಳು, ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆ ಕ್ರಮ ಕೈಗೊಂಡಿತು.