ಬೆಳಗಾವಿ : ತಮ್ಮ ವಿದ್ಯಾರ್ಥಿನಿಯರಿಗೆ ಹಿಜಾಬದೊಂದಿಗೆ ತರಗತಿ ಪ್ರವೇಶ ನಿರಾಕರಿಸಿದರಿಂದ ಪ್ರತಿಭಟನೆ ಮಾಡಿದ ಅವರ ಸಂಬಂದಿಕರು ಕಾಲೇಜು ಆವರಣದಲ್ಲಿ ಧಾರ್ಮಿಕ ಘೋಷಣೆ ಕೂಗಿದ್ದರಿಂದ ಪೊಲೀಸರು ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.
ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ದೊರೆಯದರಿಂದ ವಿಜಯಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ನ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜ್ ಆವರಣದಲ್ಲಿಯೇ ಸಮಯ ಕಳೆಯುತ್ತಿದ್ದರು. ಇದನ್ನು ಅರಿತ ಅವರ ಕುಟುಂಬದ ಸದಸ್ಯರು, ಪರಿಚಿತರು ಸ್ಥಳಕ್ಕೆ ಧಾವಿಸಿ ಕಾಲೇಜು ಸಿಬಂಧಿಯೊಂದಿಗೆ ಈ ಕುರಿತು ಪ್ರಶ್ನೆಸಿದರು.
ನ್ಯಾಯಾಲಯ, ಸರಕಾರದ ಆದೇಶದಂತೆ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ಹಿಜಾಬ್, ಭೂರ್ಖಾ ಧರಿಸಬಹುದು, ಆದರೆ ತರಗತಿಗೆ ಯುನಿಫಾರ್ಮ್ ನಲ್ಲಿ ಮಾತ್ರವಿರಬಹುದು ಎಂದು ತಿಳಿದಸಿದ್ದರು. ಈ ಹಂತದಲ್ಲಿ ವಾದ ಸಂಭವಿಸಿ, ಕೆಲವರು ಧಾರ್ಮಿಕ ಘೋಷಣೆ ಕೂಗಿದರು.
ಪರಸ್ಥಿತಿ ಇನ್ನೊಂದು ಘಟ ತಲುಪುವದನ್ನು ಅರಿತ ಪೊಲೀಸರು ಘೋಷಣೆ ಕೂಗಿದ ಆರು ಜನರನ್ನು ವಶಕ್ಕೆ ಪಡೆದು, ಉಳಿದವರನ್ನು ಆವರಣದ ಹೊರಗೆ ಕಳುಹಿಸಿ ಪರಸ್ಥಿತಿ ಶಾಂತಗೊಳಿಸಿದರು.
ವಿದ್ಯಾರ್ಥಿನಿಯರು ಮಾತ್ರ ತಾವು ಯಾವುದೇ ಕಾರಣಕ್ಕೂ ಹಿಜಾಬ್ ಇಲ್ಲದೇ ತರಗತಿ ಪ್ರವೇಶಿಸುವದಿಲ್ಲ ಎಂದು ಪಟ್ಟು ಹಿಡಿದ್ದಿದ್ದಾರೆ.