ಉಕ್ರೈನ್ : ಆಶ್ರಯ ಪಡೆದಿರುವ ಬಂಕರ್ ಸಮೀಪವೇ ರಷಿಯದ ಶಕ್ತಿಶಾಲಿ ಬಾಂಬ್ ಗಳು ಬಿಳುತ್ತಿವೆ, ತಮ್ಮ ದೇಶಕ್ಕೆ ಹೋಗುವ ಯಾವುದೇ ವಿಮಾನ ಬಂದರೂ ತೆರಳಲು ‘ತುದಿಗಾಲಿನ ಮೇಲೆ ನಿಂತ್ತಿರುವ’ ಯುದ್ಧಗ್ರಸ್ಥ ಉಕ್ರೈನ್ ದೇಶದಲ್ಲಿರುವ ವಿದೇಶಿಯರ ನಡುವೆ ಭಾರತದ ಈ ವ್ಯಕ್ತಿ “ಬೇಗ ಬಾ ಹೋಗೋಣ ವಿಮಾನ ಕಾಯುತ್ತಿದೆ,” ಎಂಬ ಸಹಪಾಠಿಗಳ ಆಗ್ರಹ ನಮ್ಮ ದೇಶದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ತಿರಸ್ಕರಿಸಿದ್ದಾರೆ.
ಕಾರಣ : ಅವರು ಸಾಕಿರುವ – ಮಲಿಬು – ಹೆಸರಿನ ನಾಯಿಮರಿಯನ್ನು ತಮ್ಮೊಂದಿಗೆ ಭಾರತಕ್ಕೆ ವಿಮಾನದಲ್ಲಿ ತೆಗೆದುಕೊಂಡು ಹೋಗಲು ಅನುಮತಿ ದೊರೆತಿಲ್ಲ
‘ ನನ್ನ ಮಲಿಬುವನ್ನು ಬಿಟ್ಟು ನಾನು ಎಲ್ಲೂ ಹೋಗುವದಿಲ್ಲ, ದಯವಿಟ್ಟು ನನ್ನೊಂದಿಗೆ ಅವನನ್ನೂ ಕರೆದುಕೊಂಡು ಬರಲು ಅವಕಾಶ ಕೊಡಿ…’ ಎಂದು ಮನವಿ ಮಾಡಿಕೊಂಡಿದ್ದಾರೆ. ಉಕ್ರೇನ್‌ನಲ್ಲಿರುವ ಖಾರ್ಕಿವ್‌ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ರಿಷಬ್ ಕೌಶಿಕ್.
“ಮಲಿಬು ಈ ವಿದ್ಯಾರ್ಥಿಯ ಸಾಕು ನಾಯಿಮರಿ.
ಪುಟ್ಟ ನಾಯಿಮರಿಯನ್ನು ತಮ್ಮೊಂದಿಗೆ ಭಾರತಕ್ಕೆ ಕರೆತರುವ ಸಲುವಾಗಿ ಆಡಳಿತಕ್ಕೆ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ, ಅದಕ್ಕೆ ಬೇಕಾದ ಎಲ್ಲ ಕಾಗದಪತ್ರಗಳನ್ನೂ ಸಿದ್ಧಪಡಿಸಿಕೊಳ್ಳುತ್ತಿದ್ದಾರಂತೆ.
“ಬಂಕರ್‌ನೊಳಗೆ ವಿಪರೀತ ಚಳಿಯಿರುವ ಕಾರಣ ನಾಯಿಮರಿಗೆ ಇರಲು ಬಹಳ ಕಷ್ಟವಾಗುತ್ತಿದೆ. ಹೀಗಾಗಿ, ಅದನ್ನು ಬೆಚ್ಚಗಿರಿಸಲು ಒಮ್ಮೊಮ್ಮೆ ಬಂಕರ್‌ನಿಂದ ಹೊರಬರುತ್ತಿದ್ದೇನೆ. ಸ್ಫೋಟದ ಸದ್ದಿನಿಂದ ಮಲಿಬು ಇಡೀ ದಿನ ಬೊಗಳುತ್ತಿರುತ್ತಾನೆ ಎಂದು ಕೌಶಿಕ್ ಹೇಳಿದ್ದಾನೆ. ದಯವಿಟ್ಟು ನನಗೆ ನನ್ನ ನಾಯಿಮರಿಯನ್ನು ಭಾರತಕ್ಕೆ ಒಯ್ಯಲು ಸಹಾಯ ಮಾಡಿ,” ಎಂದು ವಿನಂತಿಸಿಕೊಳ್ಳುತ್ತಿದ್ದಾರೆ.