No menu items!
Tuesday, December 3, 2024

ಅನಾರೋಗ್ಯದಿಂದ ಬಳಲುತ್ತಿದ್ದ ಭಾರತೀಯ ವೈದ್ಯಕೀಯ ವಿದ್ಯಾರ್ಥಿ ಉಕ್ರೈನ್ ನಲ್ಲಿ ಸಾವು

Must read

ನವದೆಹಲಿ: ರಷ್ಯಾದ ಸೇನೆಯ ಆಕ್ರಮಣದ ನಂತರ ಯುದ್ಧ ನಡೆಯುತ್ತಿರುವ ಉಕ್ರೇನ್‌ನಲ್ಲಿ ಭಾರತದ ಪಂಜಾಬ್‌ ಮೂಲದ ವೈದ್ಯಕೀಯ ವಿದ್ಯಾರ್ಥಿ ಬುಧುವಾರ ಅಸುನಿಗಿದ್ದಾರೆ. 22 ವರುಷದ ಚಂದನ್ ಜಿಂದಾಲ್ ಎಂಬ ವಿದ್ಯಾರ್ಥಿ ಕೆಲದಿನಗಳ ಹಿಂದೆ ಪಾರ್ಶ್ ವಾಯುಗೆ ತುತ್ತಾಗಿ ವಿನ್ನಿಟ್ಸಿಯಾ (ಕೈವ್ಸ್ಕಾ ಸ್ಟ್ರೀಟ್ 68) ತುರ್ತು ಆಸ್ಪತ್ರೆಯಲ್ಲಿ ಚಿಕಿಸ್ತೆಗೆ ದಾಖಲಾಗಿದ್ದರು.

ಪಂಜಾಬ್ ನ ಬರ್ನಾಲಾದವರಾದ ಚಂದನ್ ಉಕ್ರೇನ್‌ನ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್ ಸ್ಮಾರಕ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಮಗನ ಮೃತದೇಹವನ್ನು ದೇಶಕ್ಕೆ ತೆಗೆದುಕೊಂಡು ಬರಲು ವ್ಯವಸ್ಥೆ ಮಾಡುವಂತೆ ಅವರ ತಂದೆ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಒಂದು ದಿನದ ಹಿಂದೆ ಖಾರ್ಕಿವ್‌ನಲ್ಲಿ ಶೆಲ್ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ಹಾವೇರಿಯ ವಿದ್ಯಾರ್ಥಿಯ ಶವವನ್ನು ಮರಳಿ ತರಲು ಕೇಂದ್ರವು ಪ್ರಯತ್ನಗಳನ್ನು ನಡೆಸುತ್ತಿದೆ.

ಪ್ರಯಾಣಿಕರ ಸೇವೆಗಳಿಗಾಗಿ ಉಕ್ರೇನ್‌ನಲ್ಲಿನ ಏರ್ಪೋರ್ಟ್ ಗಳು ಮುಚ್ಚಿರುವುದರಿಂದ, ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ನೆರೆಯ ದೇಶಗಳ ಮೂಲಕ ಕರೆ ತರುವಂತೆ ಮೃತದೇಹಗಳನ್ನೂ ಮರಳಿ ತರಬಹುದು.

ಏತನ್ಮಧ್ಯೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತನ್ನ ಎಲ್ಲಾ ನಾಗರಿಕರನ್ನು ತಕ್ಷಣವೇ ಖಾರ್ಕಿವ್‌ನಿಂದ ತೊರೆಯುವಂತೆ ತುರ್ತು ಸಲಹೆಯನ್ನು ನೀಡಿದೆ. ಎಲ್ಲರೂ ಪೆಸೊಚಿನ್, ಬಾಬೆ ಮತ್ತು ಬೆಜ್ಲ್ಯುಡೋವ್ಕಾ ವಸಾಹತುಗಳನ್ನು ತಲುಪಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!