No menu items!
Thursday, December 26, 2024

ಮಗ ಮುಖ್ಯಮಂತ್ರಿಯಾದರೂ ಶಾಲೆಯ ಕಸಗುಡಿಸುವ ಕೆಲಸ ಬಿಡಲ್ಲವೆಂದ ತಾಯಿ

Must read

ಬರ್ನಾಲಾ (ಪಂಜಾಬ್): ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ ಆಮ್ ಆದ್ಮಿ ಪಕ್ಷದ ಶಾಸಕ ಲಾಭ್‌ ಸಿಂಗ್ ಉಗೋಕೆ ಅವರ ತಾಯಿ ಬಲದೇವ್ ಕೌರ್ ಅವರು ತಮ್ಮ ಮಗ ಗೆದ್ದ ನಂತರವೂ ಶನಿವಾರ ಸರ್ಕಾರಿ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮುಂದುವರೆಸಿದ್ದಾರೆ.

ಭಾದೌರ್ ಕ್ಷೇತ್ರದಿಂದ ಚನ್ನಿ ಅವರನ್ನು 37,550 ಮತಗಳ ಅಂತರದಿಂದ ಸೋಲಿಸಿದ ಲಾಭ್‌ ಸಿಂಗ್‌ ಉಗೋಕೆ ಅವರು ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

“ನಾವು ಸಂಪಾದಿಸಲೆಂದೇ ಶ್ರಮ ಪಡುತೆವೆ. ನನ್ನ ಮಗನ ಸ್ಥಾನವನ್ನು ಲೆಕ್ಕಿಸದೆ, ನಾನು ಶಾಲೆಯಲ್ಲಿ ನನ್ನ ಕರ್ತವ್ಯವನ್ನು ಮುಂದುವರಿಸುತ್ತೇ,” ಎಂದು ಬಲದೇವ್ ಕೌರ್ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಲಿರುವ ತಮ್ಮ ಮಗನ ಪಕ್ಷದ ಚಿಹ್ನೆ ಕೂಡ ತಾವು ಪ್ರತಿದಿನ ಕಸಗುಡಿಸಲು ಹಿಡಿಯುವ ಪೊರಕೆಯಾಗಿದೆ. ಪೊರಕೆ ಗುರುತಿನ ಎಎಪಿಯ ಅಭ್ಯರ್ಥಿಯಾಗಿ ತನ್ನ ಪುತ್ರನ ಗೆಲುವಿನಿಂದ ಸಂತೋಷಗೊಂಡ ಕೌರ್, ‘ಜಾಡು ನನ್ನ ಜೀವನದ ಪ್ರಮುಖ ಭಾಗವಾಗಿದೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಿದ್ದರೂ, ನನ್ನ ಮಗ ಗೆಲ್ಲುತ್ತಾನೆ ಎಂದು ನಾವು ಯಾವಾಗಲೂ ವಿಶ್ವಾಸ ಹೊಂದಿದ್ದೆವು,’ ಎಂದು ಅವರು ಹೇಳಿದರು.

ಶಾಲೆಯ ಪ್ರಿನ್ಸಿಪಾಲ್ ಅಮೃತ್ ಪಾಲ್ ಕೌರ್ ತಿಳಿಸಿದ್ದಾರೆ. “ಲಾಭ್ ಸಿಂಗ್ ಅವರ ತಾಯಿ ಬಹಳ ಸಮಯದಿಂದ ಈ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರೂಇದೆ ಶಾಲೆಯಲ್ಲೇ ಓದಿದ್ದಾರೆ. ಬಲದೇವ್ ಕೌರ್ ಅವರು ಶಾಲೆಯಲ್ಲಿ ಕೆಲಸ ಮುಂದುವರೆಸಲು ಬಯಸುತ್ತಾರೆ,’ ಎಂದು ಶಾಲೆಯ ಪ್ರಾಚಾರ್ಯ ಅಮೃತ್ ಪಾಲ್ ಕೌರ್ ಹೇಳಿದರು. ಅಲ್ಲದೇ ಕೂಲಿ ಕೆಲಸ ಮಾಡುತ್ತಿರುವ ಲಾಭ್‌ ಸಿಂಗ್ ಅವರ ತಂದೆ ದರ್ಶನ್ ಸಿಂಗ್ ಕುಟುಂಬವು ಮೊದಲಿನಂತೆಯೇ ಬದುಕುತ್ತದೆ ಎಂದು ಹೇಳಿದರು.

“ನನ್ನ ಮಗ ಕುಟುಂಬದ ಬದಲು ಜನರ ಕಲ್ಯಾಣದತ್ತ ಗಮನ ಹರಿಸಬೇಕು. ಜನರು ಅವನನ್ನು ಆಯ್ಕೆ ಮಾಡಿದರು. ಆತ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕೆಂದು ನಾವು ಬಯಸುತ್ತೇವೆ. ನಾವು ಮೊದಲಿನಂತೆಯೇ ಬದುಕುತ್ತೇವೆ,” ಎಂದು ನಿಯೋಜಿತ ಮುಖ್ಯಮಂತ್ರಿ ತಂದೆ ದರ್ಶನ್ ಸಿಂಗ್ ಹೇಳಿದ್ದಾರೆ.

ಲಾಬ್ ಸಿಂಗ್ ಉಗೋಕೆ 2013 ರಲ್ಲಿ ಎಎಪಿಗೆ ಸೇರಿದರು ಮತ್ತು ಪಕ್ಷದ ಶ್ರೇಣಿಯಲ್ಲಿ ಶೀಘ್ರವಾಗಿ ಏರಿದರು. ಅವರು 2017 ರಲ್ಲೂ ಭದೌರ್ ಕ್ಷೇತ್ರದಿಂದ ಎಎಪಿ ಟಿಕೆಟ್ ಕೇಳಿದ್ದರು ಆದರೆ ಪಕ್ಷವು ಬೇರೆಯದೇ ನಿರ್ಧಾರಕ್ಕೆ ಬಂದಿತ್ತು. ಅವರ ಗೆಲುವಿನಿಂದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಉಗೋಕೆ ಎಂಎಲ್ಎ ಆಗಿದ್ದಾರೆ ಎನ್ನುವುದನ್ನು ಇಂದಿಗೂ ನಂಬಲಾಗುತ್ತಿಲ್ಲ ಎಂದರು. “ಹಗಲು ರಾತ್ರಿ ಪಕ್ಷಕ್ಕಾಗಿ ದುಡಿಯುತ್ತಿದ್ದರು. ಅವರು ಪಕ್ಷದಿಂದ ಟಿಕೆಟ್ ಪಡೆದು ಶಾಸಕರಾಗುತ್ತಾರೆ ಎಂದು ನಾವು ಅಂದುಕೊಂಡಿರಲಿಲ್ಲ. ನಮಗೆ ಸಂತೋಷವಾಗಿದೆ,’ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಪಂಜಾಬ್ ಚುನಾವಣೆಯಲ್ಲಿ ಎಎಪಿ ಪ್ರಚಂಡ ವಿಜಯವನ್ನು ಗಳಿಸಿತು, 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ 92 ಸ್ಥಾನಗಳನ್ನು ಗೆದ್ದಿತು. ಹಿಂದೆ ಸರಕಾರ ನಡೆಸಿದ್ದ ಕಾಂಗ್ರೆಸ್ ಕೇವಲ 18 ಸ್ಥಾನಗಳನ್ನು ಗೆದ್ದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!