ಬೆಳಗಾವಿ : ರಸ್ತೆಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ವೇಗದಿಂದ ಬಂದ ಕಾರೊಂದು ಡಿಕ್ಕಿ ಹೊಡೆದು ಸಂಕೇಶ್ವರ್ ದ ಸ್ತ್ರೀ ರೋಗ ತಜ್ಞೆ ಡಾ. ಶ್ವೇತಾ ಮುರುಗೋಡ್ ಹಾಗು ಅವರ ಮಗಳು 12 ವರುಷದ ಶ್ರೇಯಾ ಕೂಡ ಅಸುನಿಗಿದ್ದಾರೆ. ಡಾ. ಶ್ವೇತಾ ಅವರಿಗೆ 38 ವರುಷ ವಯಸ್ಸಾಗಿತ್ತು.
ಡಾ. ಶ್ವೇತಾ ಅವರ ಪತಿ ಡಾ. ಸಚಿನ್ ಮುರುಗೋಡ್ ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿಯಿಂದ ಸಂಕೇಶ್ವರ್ ಗೆ ತೆರಳಿದ್ದ ಹಿಂದಿರುಗುತ್ತಿದ್ದ ಡಾ. ಮುರುಗೋಡ್ ಕುಟುಂಬದ ಕಾರು ಬೆನಕನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ರಭಸವಾಗಿ ಅಪ್ಪಳಿಸಿದೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜು- ಗುಜ್ಜಾಗಿದೆ.
ಅಪಘಾತದ ಪ್ರಕರಣ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.