ಕೋಲ್ಕತ್ತಾ: ಪಿಕ್ ಪಾಕೆಟ್ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ನಟಿ ರೂಪಾ ದತ್ತ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
“ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದ ಸ್ಥಳದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ನಟಿ ರೂಪಾ ದತ್ತಾ ಅವರನ್ನು ಬಂಧಿಸಲಾಗಿದೆ,”ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲ್ಕತ್ತಾದ ಬಿಧನ್ ನಗರ ಉತ್ತರ ಪೊಲೀಸ್ ಠಾಣೆಯ ಪ್ರಕಾರ, ಕಸದ ಬುಟ್ಟಿಗೆ ಮಹಿಳೆಯೊಬ್ಬರು ತಮ್ಮ ಬ್ಯಾಗ್ ಎಸೆಯುವುದನ್ನು ನೋಡಿದ ಪುಸ್ತಕ ಮೇಳಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಅನುಮಾನಗೊಂಡು ವಿಚಾರಿಸಿದ್ದಾರೆ. ನಟಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ರೂಪಾ ಅವರ ಬ್ಯಾಗಿನಲ್ಲಿ 65,760 ರೂಪಾಯಿ ದೊರಕಿವೆ. ಪ್ರಶ್ನಿಸಿದಾಗ, ರೂಪಾ ಅವರು ತೃಪ್ತಿದಾಯಕ ಉತ್ತರವನ್ನು ನೀಡಲಿಲ್ಲ, ಅವರನ್ನು ಮತ್ತಷ್ಟು ವಿಚಾರಣೆಗೋಳಪಡಿಸಿದಾಗ ಪುಸ್ತಕ ಮೇಳದ ಜನನಿಬಿಡ ಸ್ಥಳದಲ್ಲಿ ತಾವು ವ್ಯಕ್ತಿಯೊಬ್ಬರ ಪರ್ಸ್ ಏಗರಿಸಿರುವದಾಗಿ ಒಪ್ಪಿಕೊಂಡರು ಎಂದು ತಿಳಿಸಿದರು. ವಿಚಾರಣೆ ಹಂತದಲ್ಲಿ ಅವರು ಬಂಗಾಳಿ ಚಿತ್ರ ನಟಿ ರೂಪಾ ದತ್ತ ಎಂದು ಗೊತ್ತಾಗಿದೆ. ಸದ್ಯ ರೂಪಾ ದತ್ತ ಅವರನ್ನು ಪಿಕ್ ಪಾಕೆಟ್ ಆರೋಪದಲ್ಲಿ ಬಂಧಿಸಲಾಗಿದ್ದು, ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಇದರಲ್ಲಿ ಮತ್ತಷ್ಟು ಜನರು ತಂಡವಾಗಿ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶ ಪಡಿಸಿಕೊಂಡ ನಟಿಯ ಬ್ಯಾಗ್ ನಲ್ಲಿ ಪುರುಷರ ಹಣ ಹೊಂದಿರುವ ವಲ್ಲೆಟ್ ಗಳು ದೊರೆತ್ತಿವೆ, ಬಹುಶ ಅವುಗಳನ್ನೂ ಪುಸ್ತಕ ಮೇಳದಲ್ಲಿ ಪಿಕ್ ಪಾಕೆಟ್ ಮಾಡಿರುವ ಸಾಧ್ಯತೆಯಿದೆ. ರೂಪಾ ಎಸೆದ ತಮ್ಮ ಬ್ಯಾಗ್ ನಲ್ಲಿರುವ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಸದ್ಯ ರೂಪಾ ದತ್ತ ಅವರನ್ನು ಪಿಕ್ ಪಾಕೆಟ್ ಆರೋಪದಲ್ಲಿ ಬಂಧಿಸಲಾಗಿದ್ದು, ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಕೆಲ ವರ್ಷಗಳ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಸುಳ್ಳು ಆರೋಪ ಮಾಡಿ ರೂಪಾ ದತ್ತ ಸುದ್ದಿಯಾಗಿದ್ದರು. ಕಶ್ಯಪ್ ಅವರು ಫೇಸ್ಬುಕ್ ಮೂಲಕ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ, ರೂಪಾ, ಅನುರಾಗ್ ಹೆಸರಿನ ಇನ್ನೊಬ್ಬ ವ್ಯಕ್ತಿಯೊಂದಿಗೆ ಚಾಟ್ ಮಾಡುತ್ತಿದ್ದಳು ಎಂಬುದುವಿಚಾರಣೆಯ ಬಳಿಕ ಗೊತ್ತಾಯಿತು.