No menu items!
Thursday, December 5, 2024

ಅಮೇರಿಕೆಯಲ್ಲಿ ಟ್ಯಾಕ್ಸಿ ಓಡಿಸುತಿದ್ದಾರೆ ಆಫ್ಘ್ಗಾನಿಸ್ಥಾನ
ಮಾಜಿ ಹಣಕಾಸು ಸಚಿವ

Must read

ವಾಷಿಂಗ್ಟನ್ : ಕಳೆದ ಆಗಸ್ಟ್​ನಲ್ಲಿ ಅಫ್ಘಾನಿಸ್ತಾನ ತಾಲಿಬಾನ್ ​ಉಗ್ರರ ವಶವಾಗುವ ಮೊದಲು ಅಲ್ಲಿದ್ದ ಸರ್ಕಾರ ಪತನಗೊಂಡು ಅಫ್ಘಾನ್​ ಅಧ್ಯಕ್ಷ ಸೇರಿ ಪ್ರಮುಖ ನಾಯಕರು, ಸರ್ಕಾರಿ ಹುದ್ದೆಗಳಲ್ಲಿದ್ದವರು, ಕೇಂದ್ರದ ಸಚಿವರು ಸೇರಿ ಬಹುತೇಕ ಎಲ್ಲರೂ ಅಫ್ಘಾನ್​ ಬಿಟ್ಟು ಬೇರೆಬೇರೆ ದೇಶಗಳಿಗೆ ಹೋಗಿ ಆಶ್ರಯ ಪಡೆದಿದ್ದಾರೆ.

ಅಫ್ಘಾನ್ ನಲ್ಲಿ ತಾಲಿಬಾನ್ ಆಡಳಿತಕ್ಕೂ ಮೊದಲಿದ್ದ ಅಶ್ರಫ್​ ಘನಿ ಸರ್ಕಾರದಲ್ಲಿ ಆರ್ಥಿಕ ಖಾತೆ ಸಚಿವರಾಗಿದ್ದ ಖಲೀದ್ ಪಾಯೆಂಡಾ ಈಗ ವಾಷಿಂಗ್ಟನ್​ ಡಿಸಿಯಲ್ಲಿ ಉಬರ್​​ ಓಡಿಸುತ್ತಿದ್ದಾರೆ. ಅಫ್ಘಾನ್​​ನಲ್ಲಿ ತಾಲಿಬಾನ್​ ಉಗ್ರರ ಆಡಳಿತ ಬರುತ್ತಿದ್ದಂತೆ ರಾಜೀನಾಮೆ ನೀಡಿದ ಅವರು ಕುಟುಂಬದೊಂದಿಗೆ ವಾಷಿಂಗ್ಟನ್​ ಡಿಸಿಗೆ ತೆರಳಿದ್ದರು. ಈಗ ಜೀವನೋಪಾಯಕ್ಕಾಗಿ ಉಬರ್​ ವಾಹನ ಓಡಿಸುತ್ತಿದ್ದಾರೆ. ಅಲ್ಲದೆ ಜಾರ್ಜ್​ಟೌನ್​ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಖಲೀದ್ ಪಾಯೆಂಡಾ ಅಫ್ಘಾನ್​​ನಿಂದ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ಅಮೆರಿಕಕ್ಕೆ ಪರಾರಿಯಾಗಿದ್ದರು. ಅವರು ಅಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದರೂ ಕೂಡ ಅದು ಖಾಯಂ ಕೆಲಸವಲ್ಲ. ಆ ಕೆಲಸಕ್ಕೆ ನೀಡುವ ಸಂಬಳವೂ ಸಾಕಾಗುವುದಿಲ್ಲ. ಹೀಗಾಗಿ ಉಬರ್​ ಚಾಲನೆ ಕೆಲಸವನ್ನೂ ಶುರು ಮಾಡಿದರು. ಈ ಬಗ್ಗೆ ನನಗೆ ಸ್ವಲ್ಪವೂ ಬೇಸರವಿಲ್ಲ. ಈ ಕೆಲಸ ಸಿಕ್ಕಿ, ಜೀವನೋಪಾಯಕ್ಕೆ ಅನುಕೂಲವಾಗಿದೆ. ನಾನು ಹತಾಶನಾಗಬೇಕಿಲ್ಲ ಎಂದು ಹೇಳಿದ್ದಾರೆಎಂದು ವಾಷಿಂಗ್ಟನ್​ ಪೋಸ್ಟ್​ ವರದಿ ತಿಳಿಸಿದೆ.
ಹಾಗಿದ್ದಾಗ್ಯೂ ಸಣ್ಣ ಬೇಸರವಿದೆ. ಈಗ ನಾನು ಅಮೆರಿಕದವನಲ್ಲ. ಅಫ್ಘಾನಿಸ್ತಾನಕ್ಕೆ ಸೇರಿದವನೂ ಅಲ್ಲ. ಹೀಗಾಗಿ ಖಾಲಿತನ ಭಾವ ಕಾಡುತ್ತದೆ. ಇದಕ್ಕೆ ಯಾರನ್ನು ದೂಷಿಸುವುದು..? ಅಮೆರಿಕದ ಬಗ್ಗೆಯೂ ನನಗೆ ಅಸಮಾಧಾನವಿದೆ ಎಂದು ಹೇಳಿರುವ ಅವರು ಅಫ್ಘಾನಿಸ್ತಾನವನ್ನು ಅಮೆರಿಕ​ ಕೈಬಿಟ್ಟಿದ್ದರಿಂದ ಅದನ್ನು ತಾಲಿಬಾನಿಗಳು ವಶಪಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ ಎಂದು ವಾಷಿಂಗ್ಟನ್​ ಪೋಸ್ಟ್ ವರದಿ ಹೇಳಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!