ಬೆಳಗಾವಿ : ಮಹಾರಾಷ್ಟ್ರ ದಲ್ಲಿ ನಕಲಿ RT-PCR ನೆಗೆಟಿವ್ ಸರ್ಟಿಫಿಕೇಟ್ ಪಡೆದು ಕರ್ನಾಟಕಕ್ಕೆ ಬರಲು ಯತ್ನಿಸಿದ 12 ಜನರ ವಿರುದ್ಧ ನಿಪ್ಪಾಣಿ ಗ್ರಾಮೀಣ ಪೊಲೀಸರು ದೂರು ದಾಖಳಿಸಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರು 72 ತಾಸುಗಳಿಗೆ ಕಡಿಮೆಯಿಲ್ಲದಂತೆ ಕೋವಿಡ್ RT-PCR ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯವಾಗಿ ಪಡೆದಿರಬೇಕು. ಆದರೆ ಮಹಾರಾಷ್ಟ್ರದಿಂದ ನಿಪ್ಪಾಣಿ ಮೂಲಕ ರಾಜ್ಯ ಪ್ರವೇಶಿಸಲಿದ್ದ ಖಾಸಗಿ ಬಸ್ಸಿನಲ್ಲಿ 12 ಪ್ರಯಾಣಿಕರು ಹೊಂದಿದ್ದ ಸರ್ಟಿಫಿಕೇಟ್ ನಕಲಿಯಾಗಿದ್ದವು. ವಿಚಾರಣೆಯಲ್ಲಿ ತಾವು ಕೋಲ್ಹಾಪುರ್ ನಲ್ಲಿ ಅವುಗಳನ್ನು ಪಡೆದಿರುವದಾಗಿ ತಿಳಿಸಿದರು.
ಈಗ ಕರ್ನಾಟಕ ಪೊಲೀಸರು ಕೊಲ್ಹಾಪುರನಲ್ಲಿ ದೊರೆಯುವ ನಕಲಿ ಸರ್ಟಿಫಿಕೇಟ್ ದಂದೆಯವರ ಪತ್ತೇಯಲ್ಲಿ ತೊಡಗಿದ್ದಾರೆ.