No menu items!
Tuesday, December 3, 2024

ಕಳಪೆ ದರ್ಜೆಯ ಹೆಲ್ಮೆಟ್ ಧರಿಸಿದ್ದ ಸವಾರನಿಗೆ ದಂಡ, ಕಾನ್ಸ್ಟೇಬಲ್ ಸಸ್ಪೆಂಡ್

Must read

ಬೆಂಗಳೂರು: ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ ಪೊಲೀಸ್ ಪೇದೆಯೊಬ್ಬರು 100 ರೂಪಾಯಿ ದಂಡ ಪಡೆದು ನಂತರ ಅದನ್ನು ವಾಪಸ್​ ಕೊಟ್ಟಿದ್ದಾರೆ. ದಂಡ ಪಡೆಯುವ ಅಧಿಕಾರವಿಲ್ಲದಿದ್ದರೂ ಪಡೆದದಕ್ಕೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಎಚ್​ಎಎಲ್​ ಸಂಚಾರ ಠಾಣೆ ಕಾನ್​ ಸ್ಟೇಬಲ್​ ಪವನ್​ ದ್ಯಾಮಣ್ಣನವರ್​ ಅಮಾನತಿಗೆ ಒಳಗಾದ ಪೊಲೀಸ್.

ವಾಹನ ಸವಾರ ಕಳಪೆ ಹೆಲ್ಮೆಟ್​ ಧರಿಸಿದ್ದಾರೆಂದು ಅವರಿಂದ 100 ರೂಪಾಯಿ ದಂಡ ಪಡೆದಿದ್ದರು. ಬೈಕ್​ ಸವಾರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ದಂಡವನ್ನು ಪೇದೆ ವಾಪಸ್​ ಕೊಟ್ಟಿದ್ದಾರೆ. ಆ ದೃಶ್ಯದ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದೆ.

ವಾಹನ ಸವಾರರಿಗೆ ಸ್ಥಳದಲ್ಲಿ ದಂಡ ವಿಧಿಸುವ ಅಧಿಕಾರ ಎಎಸ್​ಐ ಮತ್ತು ಮೇಲ್ದರ್ಜೆ ಅಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಆದರೆ ಕಾನ್​ ಸ್ಟೇಬಲ್​ ಮತ್ತು ಹೆಡ್​ ಕಾನ್​ ಸ್ಟೇಬಲ್​ ಗಳಿಗೆ ಈ ಅಧಿಕಾರ ಇರುವುದಿಲ್ಲ. ಇದನ್ನು ಉಲಂಘಿಸಿ ಕಾನ್ಸ್ಟೇಬಲ್ ದಂಡ ಪಡೆದಿದ್ದರು.

ಬೆಂಗಳೂರಿನಲ್ಲಿ ಆಯ್ ಎಸ್ ಆಯ್ ಮಾರ್ಕ್ ನ ಹೆಲ್ಮೆಟ್ ದರಿಸುವ ಅಭಿಯಾನ ಪ್ರಾರಂಭವಾಗಿದು ಇನ್ನು 15 ದಿನ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಅಲ್ಲಿಯವರೆಗೆ ಸವಾರರಿಗೆ ದಂಡ ವಿಧಿಸದಂತೆ ಆದೇಶ ನೀಡಲಾಗಿದೆ. ಆದರೆ ಈ ಕಾನ್​ ಸ್ಟೇಬಲ್​ ತಪ್ಪು ಮಾಡಿರುವುದು ಕಂಡುಬಂದಿದೆ ಎಂದು ಜಂಟಿ ಪೊಲೀಸ್​ ಆಯುಕ್ತ (ಸಂಚಾರ) ಡಾ.ಬಿ.ಆರ್​. ರವಿಕಾಂತೇಗೌಡ ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!