ಬೆಳಗಾವಿ : ತಾವು ಪೊಲೀಸರೆಂದು ಹೇಳಿಕೊಂಡು ಮದುವೆಗೆ ಹೋಗುತ್ತಿದ್ದ ವೃದ್ಧ ದಂಪತಿಗಳಿದ್ದ ಕಾರನ್ನು ತಡೆದ ಇಬ್ಬರು ವ್ಯಕ್ತಿಗಳು ಮಹಿಳೆಯ 25ಗ್ರಾಂ ಚಿನ್ನದ ಮಂಗಳಸೂತ್ರ ದೋಚಿಕೊಂಡು ಪಲಾಯನ ಮಾಡಿದ ಘಟನೆ ಇಂದು ಸೋಮವಾರ ಗಣೇಶಪುರ್ ನಲ್ಲಿ ಸಂಭವಿಸಿದೆ.
ಹಳೆ ಬೆಳಗಾವಿ ನಿವಾಸಿ ಗಣಪತ ರಾಮಚಂದ್ರ ಪಾಟೀಲ್ ಎಂಬವರು ತಮ್ಮ ಪತ್ನಿಯೊಂದಿಗೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಮದುವೆಗೆ ಕಾರಿನಲ್ಲಿ ಹೊರಟಿದ್ದರು. ದ್ವಿಚಕ್ರ ವಾಹನವೊಂದರಲ್ಲಿ ಬಂದು, ಕಾರನ್ನು ತಡೆದು ನಿಲ್ಲಿಸಿದ ಇಬ್ಬರು ತಾವು ಪೊಲೀಸರೆಂದೂ ಎರಡು ದಿನಗಳಹಿಂದೆ ಈ ಭಾಗದಲ್ಲಿ ದೊರೆತ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನಗಳ ತಪಾಸನೆ ಮಾಡಲಾಗುತ್ತಿದೆ ಆದರಿಂದ ತಾವು ಧರಿಸಿದ್ದ ಮಂಗಳಸೂತ್ರ, ಕರಿಮಣಿ ಸರ ಬಿಚ್ಚಿಕೋಡಿ, ವಸ್ತ್ರದಲ್ಲಿ ಕಟ್ಟಿಕೊಡುತ್ತೇವೆ ಎಂದು ಹೇಳಿ, ಬಿಚ್ಚಿ ಕೊಟ್ಟಾಗ ತಮ್ಮದೇ ಕೈ ವಸ್ತ್ರದಲ್ಲಿ ಸುತ್ತಿಕೊಂಡು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ.
ತಾವು ಮೋಸಹೋಗಿದ್ದು ಗೊತ್ತಾಗುತ್ತಿದಂತೆ ದಂಪತಿಗಳು ಕೂಗಾಡಿದ್ದಾರೆ, ಸೇರಿದ ಜನ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಂಚಕರ ಪತ್ತೆಗೆ ರಸ್ತೆಯ ದೃಶ್ಯಗಳ ಸಿಸಿ ಕ್ಯಾಮೆರಾ ಪರಿಶೀಲಿಸುತ್ತಿದ್ದಾರೆ.
ಕೆಲವರುಷಗಳ ಹಿಂದೆ ವೃಧರನ್ನೇ ಗುರಿಯಾಗಿಸಿಕೊಂಡು ಇಂತಹ ವಂಚನೆ ಘಟನೆಗಳು ನಡೆದಿದ್ದವು. ಈಗ ಪುನಃ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.