No menu items!
Tuesday, December 3, 2024

ಅರವಿಂದ್ ಪಾಟೀಲ್ ಗೆ ಬಿಜೆಪಿ ಗ್ರೀನ್ ಸಿಗ್ನಲ್

Must read

ಪಣಜಿ : ಖಾನಾಪುರ ಮಾಜಿ ಶಾಸಕ ಅರವಿಂದ್ ಪಾಟೀಲ್ ಅವರ ಪಕ್ಷ ಸೇರ್ಪಡೆಗೆ ಕೊನೆಗೂ ಬಿಜೆಪಿ ಸಮ್ಮತಿ ನೀಡಿದೆ.

ಪಕ್ಷದ ಗೋವಾ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ, ಮಹಾರಾಷ್ಟ್ರ ದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ನಿನ್ನೆ ಪಣಜಿಯಲ್ಲಿ, ಬೆಳಗಾವಿಯ ಕೆಲ ಮುಖಂಡರೊಂದಿಗೆ ಬೆಟ್ಟಿಯಾಗಿ ಪಕ್ಷ ಸೇರ್ಪಡೆಗೆ ಅನುಮತಿ ಪಡೆದುಕೊಂಡರು.

ಕರ್ನಾಟಕ ವಿರೋಧಿ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿ, ಸಂಘಟನೆಯ ಬೆಂಬಲದಿಂದಲೇ ಶಾಸಕರಾಗಿದ್ದ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಾ. ಅಂಜಲಿ ನಿಂಬಾಳ್ಕರ್ ಅವರಿಂದ ಸೋಲಿಸಲ್ಪಟ್ಟರು. ಅಧಿಕೃತವಾಗಿ ಸೇರ್ಪಡೆಯಗಿರದಿದ್ದರೂ ಬಿಜೆಪಿ ಪರವಾಗಿಲ್ಲ ಕಳೆದ ಎರಡು ಉಪಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು.

ಯಾವುದೇ ಷರತ್ತಿಲದೇ ಬಿಜೆಪಿ ಸೇರುತ್ತಿರುವದಾಗಿ ತಿಳಿಸಿರುವ ಅವರು ಮುಂದಿನ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಸ್ಪರ್ದಿಸುವ ಸಾಧ್ಯತೆಯಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!