ಬೆಳಗಾವಿ : ಮುಖಕ್ಕೆ ಮಾಸ್ಕ್ ಧರಿಸಿದ್ದ ಅಪರಿಚಿತ ಗುಂಪೋಂದು
ಖಾನಾಪುರ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಜಯಂತ್ ತಿನೇಕರ್ ಅವರ ಮೇಲೆ ನಿನ್ನೆ ಸಂಜೆ ಬೆಳಗಾವಿ ಹೊರವಲಯದ ಜಾಡ್ ಶಹಾಪುರನಲ್ಲಿ ಹಲ್ಲೆ ಮಾಡಿದೆ. ಹಳ್ಳಿಯಿಂದ ಗಾಯಗೊಂಡಿರುವ ತಿನೇಕರ್ ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾವಿರಾರು ಕೋಟಿ ರೂಪಾಯಿಯ ನಕಲಿ ಛಾಪಾ ಕಾಗದ (ಸ್ಟ್ಯಾಂಪ್ ಪೇಪರ್ ) ಹಗರಣ ಬಯಲಿಗೆಳೆದಿದ್ದ ತಿನೇಕರ್ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದುಕೊಳ್ಳುವ ಮೂಲಕ ಅನೇಕ ಭ್ರಷ್ಟರಲ್ಲಿ ನಡುಕ ಹುಟ್ಟಿಸಿದ್ದರು.
ಅವರ ಜೀವಕ್ಕೆ ಅಪಾಯವಿದುದ್ದರಿಂದ ಸರಕಾರ ಅವರಿಗೆ ಓರ್ವ ಗನ್ ಮ್ಯಾನ್ ಸೆಕ್ಯೂರಿಟಿ ಕೂಡ ಒದಗಿಸಿತ್ತು.