ಬೆಳಗಾವಿ : ರಾಜ್ಯದಲ್ಲಿ ಇತ್ತೀಚಿಗೆ ಮೆತ್ತಗಾಗುತ್ತಿರುವ ಕೊರೋನಾ ಸೋಂಕು ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ಹೊಸ ಹೊಸ ದಾಖಲೆ ಸ್ಥಾಪಿಸುತ್ತಿದೆ. ಈ ವರೆಗಿನ ಎಲ್ಲ ದಾಖಲೆಗಳನ್ನು ಮುರಿದಿರುವ ಸೋಂಕು ಗುರುವಾರ 1508 ಜನರಲ್ಲಿ ಕಂಡುಬಂದಿದೆ. ಅಲ್ಲದೇ ಸೊಂಕಿನಿಂದ ಬಳಲುತ್ತಿದ್ದ ಮೂವರು ನಿಧನರಾಗಿದ್ದಾರೆ.
ಸೊಂಕೀತರಲ್ಲಿ ಬಹುತೇಕರು ತಮ್ಮ ಮನೆಗಳಲ್ಲೇ ಐಸೋಲೇಟ್ ಆಗಿದ್ದು, ಜಿಲ್ಲೆಯಲ್ಲಿ 7,354 ಆಕ್ಟಿವ್ ಕೇಸ್ ಗಳಿವೆ.
ರಾಜ್ಯದಲ್ಲಿ ಇಂದು ಬೆಂಗಳೂರಿನ 6640 ಸೇರಿದಂತೆ 16,436 ಜನರಲ್ಲಿ ಸೋಂಕು ಕಂಡುಬಂದಿದೆ, 60 ಸೊಂಕಿತರು ನಿದಾನರಾಗಿದ್ದಾರೆ
ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ಸೊಂಕೀತರ ಸಂಖ್ಯೆ ಪ್ರತಿದಿನ ಸಾವಿರ ಸಂಖ್ಯೆ ದಾಟ್ಟುತ್ತಿದೆ.